ನನಗೂ ಅಡುಗೆ ಮನೆಗೂ ಅಷ್ಟಕ್ಕಷ್ಟೆ.. ಮನೆಯಲ್ಲಿ ಆಯಿ, ಅಜ್ಜಿ ಇಬ್ಬಿಬ್ರುಇದ್ದಿದ್ರಿಂದನೋ ಏನೊ, ಅಥ್ವ ದಿನಾ ನೈವೇದ್ಯಕ್ಕೆ ಮಡೀಲಿ ಅಡ್ಗೆ ಮಾಡ್ಬೇಕಿದ್ದಿದ್ರಿಂದನೋ ಏನೊ, ಅಂತೂ ಮದ್ವೆಗೆ ಮುಂಚೆ ನನ್ನ ಅಡ್ಗೆ ಮನೆ ಕೆಲ್ಸ ಕಾಯಿಪಲ್ಲೆ ಹೆಚ್ಚಿ ಕೊಡೋದು, ತೆಂಗಿನ್ ಕಾಯಿ ತುರ್ಯೋದು, ಅಮ್ಮ ಇಲ್ಲದಾಗ ಅಜ್ಜಿಗೆ ದೋಸೆ ಹಿಟ್ಟನ್ನು ಗ್ರೈಂಡರಿಗೆ ಹಾಕಿ ಕೊಡೋದು...... ಇಷ್ಟಕ್ಕೇ ಸೀಮಿತವಾಗಿತ್ತು.ಹಾಗಾಗಿ ಹೊಸ ರುಚಿ ಪ್ರಯೋಗ ಗಳೆಲ್ಲ ಮಾಡಿದ್ದೇ ಇಲ್ಲ ಅಂತ ಹೇಳ್ಬೇಕು..ನನ್ನ ಅಡುಗೆ ಜ್ನಾನ ಅನ್ನ, ಹುಳಿ,ತಂಬ್ಳಿ, ಅಪ್ಪೇಹುಳಿ, ದೋಸೆ, ಉಪ್ಪಿಟ್ಟು, ಶಿರ, ಪಾಯ್ಸ ಕ್ಕೆ ನಿಂತಿತ್ತು.
ಮತ್ತೆ ಮದುವೆಗೆ ಮುಂಚೆ ನಾನು ಕೆಲಸಕ್ಕೆ ರಿಸೈನ್ ಮಾಡಿ ಮನೆಯಲ್ಲಿ ಇದ್ದಿದ್ದು ೧೦-೧೨ ದಿನ ಮಾತ್ರ.. ಆ ದಿನಗಳೆಲ್ಲ ಮದುವೆ ತಯಾರಿ, ಆಮಂತ್ರಣ ಕೊಡೋದು, ಫೋನಾಯಣಗಳಲ್ಲೆ ಮುಗಿದು ಹೋಗಿದ್ವು..
ಉಡುಪಿ ಕಡೆ ಮದುವೆ ಮಾಡಿ ಕೊಡ್ತಾ ಇರೋದ್ರಿಂದ, (ಇಲ್ಲಿನವ್ರು ವೆರೈಟಿ ಅಡುಗೇಲಿ ಬಾರೀ ಶೂರರಿರೋದ್ರಿಂದ) ಆಯಿ "ಸಮಾ ಕಲ್ತಗಂಡು ಹೋಗೆ , ಅಲ್ಲಿ ಹೋಗಿ ಮರ್ಯಾದಿ ತೆಗ್ಯಡ.. ನಾಲ್ಕ್ ನಮನಿ ಆದ್ರು ನಾಲ್ಕ್ ಜನಕ್ಕೆ ಮಾಡುದ್ ಕಲಿ" ಹೇಳಿ ಎಷ್ಟು ಬೈದರೂ ನಾನು "ಹೋಗ್ಲಿ ಬಿಡೇ, ಅವ್ರಿಗೆ ಅಡ್ಗೆ ಚೊಲೊ ಬತ್ತಡ, ಮತ್ತೆ ಇಲ್ಲಿ ಅಲ್ಲಿ ಅಡ್ಗೆ ರೀತಿ ಬೆರ್ಬೇರೆ.., ನಾ ಇಲ್ಲಿ ಎಷ್ಟ್ ಕಲತ್ರು ಮತ್ತೆ ಅಲ್ಲಿ ಹೋಗಿ ಕಲ್ಯದೇಯ.. ಹಂಗಾಗಿ ಅಲ್ಲೋಗೆ ಹೊಸ್ತಾಗಿಂದ ಕಲಿತೆ" ಅಂತ ಏನೇನೋ ಹೇಳಿ ಬಾಯಿ ಮುಚ್ಚಿಸಿದ್ದೆ..
[ತನಗೆ ಅಡ್ಗೆ ಚೆನ್ನಾಗಿ ಬರತ್ತೆ ಅಂತ ಅವರು ಮದ್ವೆಗ್ ಮುಂಚೆನೇ ಹೇಳ್ಬಿಟ್ಟು ಈಗ ದಿನಾಲು ಪಶ್ಚಾತ್ತಾಪ ಪಡ್ತಿರೋದು ಬೇರೆ ವಿಚಾರ!!]
ಆದ್ರೆ ಮತ್ತೆ ಮದುವೆ ಆಗಿ ಬಂದ ಮೇಲೆ ನನಗೂ ಅಡುಗೆಯಲ್ಲಿ ಭಯಂಕರ್ ಇಂಟೆರೆಸ್ಟ್ ಬಂದು ಗೂಗಲಿಸಿ ಗೂಗಲಿಸಿ, ಅವರಿವರನ್ನ ಕೇಳಿಕೇಳಿ ನೊರ್ಥ್ ಇಂಡಿಯನ್, ಸೌತ್ ಇಂಡಿಯನ್ ಅಂತೆಲ್ಲ ಮಾಡಿ ಮಾಡಿ, ತಿಂದು, ತಿನ್ನಿಸಿ, ಇಬ್ಬರೂ ಉಬ್ಬಿದ್ದಂತೂ ನಿಜ!!!

(source: internet)
ಇರಲಿ...ಈಗ ಬಟಾಟೆ ಚಪಾತಿ ವಿಷಯಕ್ಕೆ ಬರೋಣ... ಏನಾಯಿತಪ್ಪಾ ಅಂದ್ರೆ, ಮೊನ್ನೆ ಒಂದು ಸಂಡೇ ಮಧ್ಯಾಹ್ನ ಆಲೂ ಪರೋಟ ಮಾಡಲು ತಯಾರಿ ಮಾಡಿದೆ..ಅವರಿವರಲ್ಲಿ ಕೇಳಿ, ರೆಸಿಪಿ ಸೈಟ್ ಗಳನ್ನೆಲ್ಲ ಜಾಲಾಡಿ ಒಂದು ಮೆಥಡ್ ಫೈನಲೈಸ್ ಮಾಡಿದೆ..
ಆಲೂ ಪಲ್ಯ ರೆಡಿ ಆಯಿತು, ಹಿಟ್ಟು ಕಲಸಿದೆ.. ಹೋಳಿಗೆಯ ಥರ ತುಂಬಿ ಲಟ್ಟಿಸಲು ನೋಡಿದರೆ...ಥತ್.. ಪಲ್ಯ ಹೊರಕ್ಕೆ ಬರ್ತಾ ಇದೆ!!! ಹತ್ರ ಹತ್ರ ಮಧ್ಯಾಹ್ನ ೧ ಗಂಟೆ.. ಟೆನ್ಷನಲ್ಲಿ ಒಂದರ ಮೇಲೊಂದು ಚಪಾತಿ ಇಟ್ಟು ಮಧ್ಯ ಪಲ್ಯ ಹರಡುವ ಮೆಥಡ್ಡೂ ವರ್ಕ್ ಔಟ್ ಆಗ್ತಿಲ್ಲ....:(
ಏನ್ ಮಾಡೋದು, ೨ ಗಂಟೆಗೆ ಅವ್ರು ಡ್ಯೂಟಿ ಮುಗ್ಸಿ ಬರೋದ್ರೊಳ್ಗೆ ರೆಡಿ ಆಗ್ಬೇಕು... ಏನಾದ್ರಾಗ್ಲಿ ಅಂತ ಪಲ್ಯ+ಹಿಟ್ಟು ಸೇರ್ಸಿ ಚೆನ್ನಾಗಿ ಕಲಸ್ಬಿಟ್ಟೆ.. ಪಿಚ ಪಿಚ ಆಗಿ, ಇನ್ನಷ್ಟು ಹಿಟ್ಟು ಸೇರಿಸಿ ಒಂದು ಹದಕ್ಕೆ ತಂದು ಪ್ಲಾಸ್ಟಿಕ್ ಹಾಳೆ ಮೇಲೆ ಲಟ್ಟಿಸಿ ಒಂದು ರೂಪಕ್ಕೆ ತಂದು ಕಾಯಿಸಿದೆ.. ಎರಡು ಮಾಡಿ ಆಗೋವಷ್ಟ್ರಲ್ಲಿ ಶೇಪ್ ಸರಿ ಆಯ್ತು...೨ ಗಂಟೆ ಒಳ್ಗೆ ರೆಡಿನೂ ಆಯ್ತು.. ಉಸ್ಸಪ್ಪಾ ಅಂತ ಕೂತೆ.. ನಾಲಿಗೆ ತುರಿಸ್ತಾ ಇತ್ತು.. ನನ್ನ ಸಾಹಸ ಗಾಥೆನ ಯಾರ್ಗಾದ್ರು ಹೇಳ್ಬೇಕಲ್ಲ,,,ಆಯಿಗೆ ಫೋನ್ ಮಾಡಿದೆ....
ಆಯಿ: ಎಂತದೆ ಮಟ ಮಟ ಮಜ್ಜಾನ ಪೋನ್ ಮಾಡಿದ್ದೆ?
ನಾನು: ಆಯೀ, ನಾ ಇವತ್ತು ಆಲು ಪರೋಟ ಮಾಡಿದ್ನೆ, ಫರ್ಸ್ಟ್ ಟೈಮ್, ಅವ್ರಿಗೆ ಸರ್ಪ್ರೈಸ್ ಆಗಿ! ಎಂತ ಮಸ್ತ್ ಆಜು ಗೊತ್ತಿದ್ದ?? (ತಿಂದಿರಲಿಲ್ಲ, ಸುಮ್ನೆ)
ಆಯಿ: ಅಂದ್ರ್ ಎಂತದು? ಹೆಂಗ್ ಮಾಡುದು ಅದು?
ನಾನು: .......................(ಹತ್ತು ನಿಮ್ಶ ಎಕ್ಸ್ ಪ್ಲೈನ್ ಮಾಡಿದೆ ಒಳ್ಳೆ ಉತ್ಸಾಹದಲ್ಲಿ)
ಆಯಿ:ಅದೆಂತ ಮಳ್ಳೇಯ.. ಬಟಾಟೆ ಚಪಾತಿ ಮಾಡ್ಕಂಡು ಎಂತೊ ದೊಡ್ ಹೆಸ್ರಿಟ್ಟಿಕಿದು... ಇದ್ರ್ ಮಾಡುಲ್ ಇಷ್ಟ್ ಕಷ್ಟ ಪಟ್ಯಾ?
ನಾನು: ?!?!?!?! :(

No comments:
Post a Comment